- MAKE A DONATIONದೇಣಿಗೆ ನೀಡಿ
- Select Theme ಥೀಮ್ ಆಯ್ಕೆಮಾಡಿ
- Skip to Main Content ಮುಖ್ಯ ವಿಷಯಕ್ಕೆ ತೆರಳಿ
Tourist Hub ಪ್ರವಾಸಿ ಕೇಂದ್ರ
The Forest Department also allows
tourists to be taken on
safaris in
the Lakkavalli and Muthodi ranges of
the reserve. Safaris are also conducted through Jungle Lodges and Resorts, which is a government
undertaking. With a small area allocated for tourist activity within the reserve and only a small number
of vehicles entering it, the pressures on the reserve are minimal. This allows the serious eco-tourist
to enjoy the beauty of the reserve and also preserve it.
The chance of sighting the elusive tiger or leopard, coming face to face with the mighty
elephant or
gaur or listening to the sounds of music by the several colorful birds will humble and mesmerize the
tourist, who will only want to experience more of this richness of nature. The Muthodi Nature Camp is a
popular destination for school kids and nature lovers. It is situated within the Muthodi Range of the
reserve. The Camp has 2 large
dormitories which can accommodate 16 people. The Salim Ali Interpretation Center provides
information on
the history of the reserve. There is a proposal to move the camp to the buffer area in a phased manner
over the next few years.
ಅರಣ್ಯ ಇಲಾಖೆ ಪ್ರವಾಸಿಗರನ್ನು ಹುಲಿ ಸಂರಕ್ಷಿತ ಪ್ರದೇಶದ ಲಕ್ಕವಳ್ಳಿ ಮತ್ತು ಮುತ್ತೋಡಿ ಪ್ರದೇಶಗಳಲ್ಲಿ ಸಫಾರಿಗೆ ಕರೆದೊಯ್ಯಲು ಅನುಮತಿಸುತ್ತದೆ. ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಮತ್ತು ರೆಸಾಟ್ಸ್ ಮೂಲಕವು ಸಫಾರಿ ನಡೆಸಲಾಗುತ್ತದೆ. ಸಂರಕ್ಷಿತ ಪ್ರದೇಶದ ಒಂದು ಸಣ್ಣ ಪ್ರದೇಶವನ್ನು ಮಾತ್ರ ಪ್ರವಾಸಿ ಚಟುವಟಿಕೆಗಳಿಗೆ ಮೀಸಲಾಗಿರಿಸಿದ್ದು, ಕೇವಲ ಕೆಲವು ಸಂಖ್ಯೆಯ ವಾಹನಗಳು ಮಾತ್ರ ಪ್ರವೇಶಿಸುವುದರಿಂದ, ಇದು ಸಂರಕ್ಷಿತ ಪ್ರದೇಶದ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನೈಜ ಪರಿಸರ ಪ್ರವಾಸಿಗರು ಸಂರಕ್ಷಿತ ಪ್ರದೇಶದ ಸೌಂದರ್ಯವನ್ನು ಸವಿಯಲು ಮತ್ತು ಅದನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.
ಹುಲಿ ಅಥವಾ ಚಿರತೆ ನೋಡುವ ಅಪರೂಪದ ಅವಕಾಶ, ದೊಡ್ಡ ಆನೆ ಅಥವಾ ಕಾಡೆಮ್ಮೆಯೊಂದಿಗೆ ಮುಖಾಮುಖಿಯಾಗುವ ಅನುಭವ ಅಥವಾ ಹಲವಾರು ಬಣ್ಣದ ಪಕ್ಷಿಗಳ ಚಿಲಿಪಿಲಿ ಆಲಾಪನೆ ಪ್ರವಾಸಿಗರನ್ನು ಸಂತೋಷಗೊಳಿಸುತ್ತದೆ ಮತ್ತು ಅವರನ್ನು ಪ್ರಕೃತಿಯ ಸಮೃದ್ಧಿಯನ್ನು ಮತ್ತಷ್ಟು ಅನುಭವಿಸಲು ಪ್ರೇರೇಪಿಸುತ್ತದೆ. ಮುತ್ತೋಡಿ ಪ್ರಕೃತಿ ಶಿಬಿರವು ಶಾಲಾ ಮಕ್ಕಳ ಮತ್ತು ಪ್ರಕೃತಿ ಪ್ರೇಮಿಗಳಿಗಾಗಿ ಜನಪ್ರಿಯಸ್ಥಳವಾಗಿದೆ. ಇದು ಮುತ್ತೋಡಿ ವನ್ಯಜೀವಿ ವಲಯ ಕಛೇರಿಯ ಬಳಿ ಇರುತ್ತದೆ. ಈ ಶಿಬಿರದಲ್ಲಿ 2 ದೊಡ್ಡ ವಸತಿಗೃಹಗಳಿದ್ದು, ಒಮ್ಮೆಗೆ 16 ಜನರು ವಾಸ್ತವ್ಯ ಹೂಡ ಬಹುದಾಗಿದೆ. ಸಲಿಂ ಅಲಿ ವಿವರಣಾ ಕೇಂದ್ರವು ಸಂರಕ್ಷಿತ ಪ್ರದೇಶದ ಇತಿಹಾಸದ ಕುರಿತು ಮಾಹಿತಿ ಒದಗಿಸುತ್ತದೆ. ಶಿಬಿರವನ್ನು ಮುಂದಿನ ಕೆಲವು ವರ್ಷಗಳಲ್ಲಿ ಹಂತಹಂತವಾಗಿ ಬಫರ್ ಪ್ರರ್ದೇಶಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಯಿದೆ.
Safaris at Bhadra Tiger Reserve : ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಸತಿ ವ್ಯವಸ್ಥೆ
Accommodation can be reserved at the Lakkavalli
forest
rest house or at Muthodi Nature Camp.
Lakkavalli forest rest house can accommodate 6 people and the Muthodi Nature Camp has 2
dormitories for 16 people, 1 teachers quarters, 1 cottage and 2 tents.
ವಸತಿ ವ್ಯವಸ್ಥೆಯನ್ನು ಲಕ್ಕವಳ್ಳಿ ಅರಣ್ಯ ವಿಶ್ರಾಂತಿ ಗೃಹ ಅಥವಾ ಮುತ್ತೋಡಿ ಪ್ರಕೃತಿ ಶಿಬಿರದಲ್ಲಿ ಕಾಯ್ದಿರಿಸಬಹುದು. ಲಕ್ಕವಳ್ಳಿ ಅರಣ್ಯ ವಿಶ್ರಾಂತಿಗೃಹವು 6 ಜನರು ವಾಸ್ತವ್ಯ ಹೂಡಬಹುದಾದ ವ್ಯವಸ್ಥೆ ಹೊಂದಿರುತ್ತದೆ. ಮುತ್ತೋಡಿ ಪ್ರಕೃತಿ ಶಿಬಿರವು 16 ಜನರು ವಾಸ್ತವ್ಯ ಹೂಡಬಹುದಾದ 2 ದೊಡ್ಡ ವಸತಿಗೃಹಗಳು, 1 ಶಿಕ್ಷಕರ ವಸತಿ ಗೃಹ, 1 ಕೊಠಡಿ ಮತ್ತು 2 ಡೇರೆಗಳನ್ನು ಹೊಂದಿದೆ.
Eco-tourists can also make reservations at River Tern Lodge, run by the Jungle Lodges and
Resorts to stay and enter the Bhadra Tiger Reserve (See River Tern Lodge). There are alternate
accommodations available at Chikmagalur which can be found online.
ಪರಿಸರ ಪ್ರವಾಸಿಗರು ಜಂಗಲ್ ಲಾಡ್ಜಸ್ ಮತ್ತು ರೆಸಾಟ್ಸ್ ನಲ್ಲಿ ಉಳಿಯಲು ಮತ್ತು ಭದ್ರಾಹುಲಿ ಸಂರಕ್ಷಿತ ಪ್ರದೇಶ ಪ್ರವೇಶಿಸಲು ಕಾಯ್ದಿರಿಸಬಹುದು. ಚಿಕ್ಕಮಗಳೂರು ನಗರದಲ್ಲಿ ಇತರ ವಸತಿ ವ್ಯವಸ್ಥೆಗಳಿದ್ದು ಅವುಗಳನ್ನು ಆನ್‌ಲೈನ್‌ನಲ್ಲಿ ಹುಡುಕ ಬಹುದಾಗಿರುತ್ತದೆ.
Stay at Bhadra Tiger Reserve : ಭದ್ರಾ ಹುಲಿ ಅಭಯಾರಣ್ಯದಲ್ಲಿ ಉಳಿಯಿರಿ:
Accommodation can be reserved at the Lakkavalli forest rest house or at Muthodi Nature Camp. Lakkavalli forest rest house can accommodate 6 people and the Muthodi Nature Camp has 2 dormitories for 16 people, 1 teachers quarters, 1 cottage and 2 tents.
ವಸತಿ ವ್ಯವಸ್ಥೆಯನ್ನು ಲಕ್ಕವಳ್ಳಿ ಅರಣ್ಯ ವಿಶ್ರಾಂತಿ ಗೃಹ ಅಥವಾ ಮುತ್ತೋಡಿ ಪ್ರಕೃತಿ ಶಿಬಿರದಲ್ಲಿ ಕಾಯ್ದಿರಿಸಬಹುದು. ಲಕ್ಕವಳ್ಳಿ ಅರಣ್ಯ ವಿಶ್ರಾಂತಿಗೃಹವು 6 ಜನರು ವಾಸ್ತವ್ಯ ಹೂಡಬಹುದಾದ ವ್ಯವಸ್ಥೆ ಹೊಂದಿರುತ್ತದೆ. ಮುತ್ತೋಡಿ ಪ್ರಕೃತಿ ಶಿಬಿರವು 16 ಜನರು ವಾಸ್ತವ್ಯ ಹೂಡಬಹುದಾದ 2 ದೊಡ್ಡ ವಸತಿಗೃಹಗಳು, 1 ಶಿಕ್ಷಕರ ವಸತಿ ಗೃಹ, 1 ಕೊಠಡಿ ಮತ್ತು 2 ಡೇರೆಗಳನ್ನು ಹೊಂದಿದೆ.
Eco-tourists can also make reservations at River Tern Lodge, run by the Jungle Lodges and
Resorts to stay and enter the Bhadra Tiger Reserve (See River Tern Lodge). There are alternate
accommodations available at Chikmagalur which can be found online.
ಪರಿಸರ ಪ್ರವಾಸಿಗರು ಜಂಗಲ್ ಲಾಡ್ಜಸ್ ಮತ್ತು ರೆಸಾಟ್ಸ್ ನಲ್ಲಿ ಉಳಿಯಲು ಮತ್ತು ಭದ್ರಾಹುಲಿ ಸಂರಕ್ಷಿತ ಪ್ರದೇಶ ಪ್ರವೇಶಿಸಲು ಕಾಯ್ದಿರಿಸಬಹುದು. ಚಿಕ್ಕಮಗಳೂರು ನಗರದಲ್ಲಿ ಇತರ ವಸತಿ ವ್ಯವಸ್ಥೆಗಳಿದ್ದು ಅವುಗಳನ್ನು ಆನ್‌ಲೈನ್‌ನಲ್ಲಿ ಹುಡುಕ ಬಹುದಾಗಿರುತ್ತದೆ.
Safari Information
ಸಫಾರಿ ಮಾಹಿತಿ
Amenities
ಸೌಲಭ್ಯಗಳು
Nearby Attractions
ಹತ್ತಿರದ ಆಕರ್ಷಣೆಗಳು.
Explore the stunning natural beauty surrounding the Bhadra Tiger Reserve, including:
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಸುಂದರ ನೈಸರ್ಗಿಕ ಸೌಂದರ್ಯವನ್ನು ಅನ್ವೇಷಿಸಿ,