Any Query/Help Kindly Contact us

ಯಾವುದೇ ಪ್ರಶ್ನೆ/ ಸಹಾಯಕ್ಕಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ

Contact details:

ಸಂಪರ್ಕ ವಿವರಗಳು:

Office landline

ಕಛೇರಿ ಸ್ಥಿರ ದೂರವಾಣಿ

08262234904

Office mobile

ಕಛೇರಿ ಮೊಬೈಲ್

+91-9448276555

Available from 10 AM to 5 Pm
ಲಭ್ಯವಿರುವ ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ
Address:
ವಿಳಾಸ:

Field Director,
Bhadra Tiger Reserve,
Chikmagalur-577101.

ಕ್ಷೇತ್ರ ನಿರ್ದೇಶಕರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶ,
ಕೆನರಾ ಬ್ಯಾಂಕ್ ಹತ್ತಿರ, ಗವನಹಳ್ಳಿ, ರಾಂಪುರ ಅಂಚೆ,
ಚಿಕ್ಕಮಗಳೂರು – 577133

You can also write to us an Email

ನೀವು ನಮಗೆ ಇಮೇಲ್ ಮಾಡ ಬಹುದು

Frequently Asked Questions

ನಿತ್ಯ ಕೇಳಲಾಗುವ ಪ್ರಶ್ನೆಗಳು

How to reach? ಹೇಗೆ ತಲುಪುವುದು?
Where is Bhadra Tiger Reserve Located? ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಎಲ್ಲಿದೆ?

Bhadra Tiger Reserve is situated in the Malnad region of Karnataka, India, spanning the districts of Chikmagalur and Shimoga. It covers an area of 571.84 sq km in the lush Western Ghats and is named after the Bhadra River, which flows through the reserve.

ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕದ ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಸ್ತರಿಸಿದೆ. ಇದು 571.84 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಭದ್ರಾ ಎಂಬ ಹೆಸರು ಪಶ್ಚಿಮ ಘಟ್ಟಗಳ ಹಸಿರು ಕಾಡುಗಳಲ್ಲಿ, ಹರಿಯುವ ಭದ್ರಾ ನದಿಯಿಂದ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಹೆಸರು ಬಂದಿದೆ

How do I reach Bhadra Tiger Reserve? ಭದ್ರಾಹುಲಿ ಸಂರಕ್ಷಿತ ಪ್ರದೇಶಕ್ಕೆ ಹೇಗೆ ತಲುಪುವುದು?

● By Air: The nearest airport is Mangalore International Airport, approximately 180 km away. From the airport, you can hire a taxi or take a bus to reach the reserve.

● By Train: The nearest railway stations are Shimoga (30 km from Lakkavalli) and Chikmagalur (33 km from Muthodi). From these stations, local transportation like taxis or buses can take you to the reserve.

● By Road: Bhadra Tiger Reserve is well connected by road. It is about 273 km from Bangalore via NH75 and NH173. Regular buses, taxis, and private vehicles can be used to reach the reserve.

● ವಿಮಾನದಿಂದ: 180 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಶಿವಮೊಗ್ಗ ನಿಲ್ದಾಣ (ಲಕ್ಕವಳ್ಳಿಯಿಂದ 30 ಕಿ.ಮೀ) ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ಸಂರಕ್ಷಿತ ಪ್ರದೇಶಕ್ಕೆ ತಲುಪಬಹುದು.

● ರೈಲಿನಿಂದ: ಹತ್ತಿರದ ರೈಲು ನಿಲ್ದಾಣಗಳು ಶಿವಮೊಗ್ಗ (ಲಕ್ಕವಳ್ಳಿಯಿಂದ 30 ಕಿ.ಮೀ) ಮತ್ತು ಚಿಕ್ಕಮಗಳೂರು (ಮುತ್ತೋಡಿಯಿಂದ 33 ಕಿ.ಮೀ) ಇರುತ್ತವೆ. ಅಲ್ಲಿಂದ ಸ್ಥಳೀಯ ಸಾರಿಗೆ, ಟ್ಯಾಕ್ಸಿ ಅಥವಾ ಬಸ್ ಮೂಲಕ ಸಂರಕ್ಷಿತ ಪ್ರದೇಶಕ್ಕೆ ತಲುಪಬಹುದು.

● ರಸ್ತೆಯ ಮೂಲಕ: ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ರಸ್ತೆ ಮಾರ್ಗದಿಂದ ಉತ್ತಮ ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ 273 ಕಿ.ಮೀ ಅಂತರದಲ್ಲಿ NH75 ಮತ್ತು NH73 ಮೂಲಕ ತಲುಪಬಹುದು. ನಿಯಮಿತ ಬಸ್ ಸೇವೆಗಳು, ಟ್ಯಾಕ್ಸಿಗಳು ಮತ್ತು ಖಾಸಗಿ ವಾಹನಗಳ ಮೂಲಕ ಪ್ರಯಾಣಿಸಬಹುದು.

How do I contact the Bhadra Tiger Reserve Management? ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆ ಮಾಡುವವರನ್ನು ಹೇಗೆ ಸಂಪರ್ಕಿಸ ಬಹುದು?

You can contact the Bhadra Tiger Reserve Management through the Forest Department Office at Chikmagalur or Shimoga. For bookings, inquiries, or further information, please call the Bhadra Tiger Reserve office at [Contact Number] or email us at [Email Address].

ಚಿಕ್ಕಮಗಳೂರು, ಮುತ್ತೋಡಿ ಅಥವಾ ಲಕ್ಕವಳ್ಳಿ ಅರಣ್ಯ ಇಲಾಖಾ ಕಛೇರಿಯ ಮೂಲಕ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆ ಮಾಡುವವರನ್ನು ಸಂಪರ್ಕಿಸಬಹುದು. ಬುಕ್ಕಿಂಗ್‌ಗಳು, ವಿಚಾರಣೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕ ಸಂಖ್ಯೆಗೆ ಕರೆಮಾಡಿರಿ ಅಥವಾ ನಮಗೆ ಇ-ಮೇಲ್ ಮಾಡಿರಿ.

Which are the entry points to Bhadra Tiger Reserve? ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಯಾವ ಪ್ರವೇಶ ಕೇಂದ್ರಗಳಿವೆ?

Bhadra Tiger Reserve has two main entry points:

Muthodi Wildlife Range: Located 33 km from Chikmagalur, this entry point is ideal for visitors coming from the Chikmagalur side.

Lakkavalli Wildlife Range: Located 30 km from Shimoga, this entry point is suitable for visitors traveling from Shimoga or other parts of Karnataka.

These entry points offer access to various safari options, including Jeep, Bus, and Boat Safaris.

ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಎರಡು ಮುಖ್ಯ ಪ್ರವೇಶ ಕೇಂದ್ರಗಳು ಇವೆ:

ಮುತ್ತೋಡಿ ವನ್ಯಜೀವಿ ವಲಯ: ಚಿಕ್ಕಮಗಳೂರಿನಿಂದ 33 ಕಿ.ಮೀ ದೂರದಲ್ಲಿದ್ದು, ಚಿಕ್ಕಮಗಳೂರಿ ನಿಂದ ಪ್ರವಾಸಿಗರು ಪ್ರವೇಶಿಸಲು ಇದು ಉತ್ತಮವಾಗಿದೆ.

ಲಕ್ಕವಳ್ಳಿ ವನ್ಯಜೀವಿ ವಲಯ: ಶಿವಮೊಗ್ಗದಿಂದ 30 ಕಿ.ಮೀ ದೂರದಲ್ಲಿದ್ದು, ಶಿವಮೊಗ್ಗ ಅಥವಾ ಇತರ ಪ್ರದೇಶಗಳಿಂದ ಬಂದವರಿಗೆ ಇದು ಸೂಕ್ತವಾಗಿದೆ.

ಈ ಪ್ರವೇಶ ಕೇಂದ್ರಗಳಲ್ಲಿ ಜೀಪ್, ಬಸ್, ಮತ್ತು ಬೋಟ್ ಸಫಾರಿ ಆಯ್ಕೆಗಳು ಲಭ್ಯವಿವೆ.