Experience The Magical Tiger Rich Landscape! ಅದ್ಭುತ ಹುಲಿ ಆವಾಸಸ್ಥಾನದ ಸೊಬಗನ್ನು ಆಸ್ವಾದಿಸಿ. arrow

What Does Bhadra offer... ಭದ್ರಾ ನಿಮಗೆ ಏನನ್ನು ನೀಡುತ್ತದೆ...

Nature's Symphony. ಪ್ರಕೃತಿಯ ಮಧುರ ಧ್ವನಿ
Majestic Denizens. ಅಮೋಘ ವನ್ಯಜೀವಿಗಳು
"In The Rush Of Life, Find Serenity In Waterfalls." "ವೇಗದ ಜೀವನದಲ್ಲಿ ಪ್ರಶಾಂತತೆಯನ್ನು ಜಲಪಾತಗಳ ಬಳಿ ಕಂಡುಕೊಳ್ಳಿ"
Alluring Colours. ಮನ ಮೋಹಕ ಚಿತ್ತಾರಗಳು

Bhadra Tiger Reserve takes its name from the Bhadra river, its lifeline. Earlier, it was known as Muthodi Wildlife Sanctuary, after the village on its periphery. The Reserve is a haven for 40 species of mammals, about 250 species of birds, more than 20 species of reptiles, 10 species of amphibians, 50 species of butterflies and 10 species of fish, many of which are endemic to the Western Ghats. The visitors could go for safaris in Lakkavali, in the Northern, and Muthodi, in the Southern part of the Reserve. The Reserve is also home to the Jagara Giant, the largest Teak tree in the state with a girth of 5.1 m and a height of 32 m, which is said to be around 400 years old. Bhadra Tiger Reserve spans about 500 square km, spread across two districts Shivamogga and Chikkamagaluru districts. ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಅದರ ಜೀವನಾಡಿಯಾದ ಭದ್ರಾ ನದಿಯಿಂದ ತನ್ನ ಹೆಸರನ್ನು ಪಡೆದಿದೆ. ಇದಕ್ಕೂ ಪೂರ್ವದಲ್ಲಿ ಇದನ್ನು ಭದ್ರಾ ವನ್ಯಜೀವಿ ಅಭಯಾರಣ್ಯವೆಂದು ಕರೆಯಲಾಗುತ್ತಿತ್ತು, ಹಾಗೂ ಶ್ರೀಮಂತ ಜೀವ ವೈವಿದ್ಯತೆಯಿಂದ ಕೂಡಿದೆ. ಈ ಸಂರಕ್ಷಿತ ಪ್ರದೇಶವು 40 ಜಾತಿಗಳ ಸಸ್ತನಿಗಳು, 250 ಕ್ಕಿಂತಲೂ ಹೆಚ್ಚು ಜಾತಿಯ ಪಕ್ಷಿಗಳು, 30 ಕ್ಕಿಂತ ಹೆಚ್ಚು ಜಾತಿಯ ಸರಿಸೃಪಗಳು, 30 ಜಾತಿಯ ಉಭಯಚರಗಳು, 200ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳು, 40 ಕ್ಕಿಂತ ಹೆಚ್ಚು ಜಾತಿಯ ಮೀನುಗಳನ್ನು ಹೊಂದಿದ್ದು, ಅನೇಕವು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿವೆ. ಪ್ರವಾಸಿಗರು ಹುಲಿ ಸಂರಕ್ಷಿತ ಪ್ರದೇಶದ ಉತ್ತರ ಭಾಗದಲ್ಲಿ ಇರುವ ಲಕ್ಕವಳ್ಳಿ ಮತ್ತು ದಕ್ಷಿಣ ಭಾಗದಲ್ಲಿ ಇರುವ ಮುತ್ತೋಡಿಯಲ್ಲಿ ವನ್ಯಜೀವಿ ಸಫಾರಿಗಳ ಅನುಭವವನ್ನು ಪಡೆಯಬಹುದು. ಈ ಸಂರಕ್ಷಿತ ಪ್ರದೇಶವು ಕರ್ನಾಟಕ ರಾಜ್ಯದ ಅತಿದೊಡ್ಡ ಸಾಗುವಾನಿ(ತೇಗ) ಮರ "ಜಾಗರ ದೈತ್ಯ"ಕ್ಕೆ ಮನೆಯಾಗಿದ್ದು, ಇದರ ಒಟ್ಟು ಪರಿಧಿ 5.4 ಮೀಟರ್ ಮತ್ತು ಎತ್ತರವು 32 ಮೀಟರ್ ಆಗಿದ್ದು, ಇದು 400 ವರ್ಷಗಳಷ್ಟು ಹಳೆಯದಾಗಿದೆ ಎಂದು ಹೇಳಲಾಗುತ್ತದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶವು 500 ಚದರ ಕಿಲೋಮೀಟರ್ ವಿಸ್ತಾರವನ್ನು ಹೊಂದಿದ್ದು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವೆ ಹರಡಿಕೊಂಡಿದೆ.